1 ಒಂದು ಪ್ರವಾದನೆ: ಇಸ್ರಾಯೇಲಿನ ವಿಷಯವಾಗಿ ಯೆಹೋವ ದೇವರ ವಾಕ್ಯ.
6 “ಆ ದಿವಸದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ, ಸಿವುಡುಗಳಲ್ಲಿರುವ ಬೆಂಕಿಯ ಪಂಜಿನ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ, ಎಡಗಡೆಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನೂ ನುಂಗಿಬಿಡುವರು. ಆದರೆ ಯೆರೂಸಲೇಮಿನವರು ತಿರುಗಿ ತನ್ನ ಸ್ಥಳದಲ್ಲಿ ಯೆರೂಸಲೇಮಿನಲ್ಲಿಯೇ ಸುರಕ್ಷಿತವಾಗಿ ವಾಸಿಸುವರು.
7 “ಇದಲ್ಲದೆ ದಾವೀದನ ಮನೆಯ ಘನತೆಯೂ, ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ, ಯೆಹೋವ ದೇವರು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವರು. 8 ಆ ದಿನದಲ್ಲಿ ಯೆಹೋವ ದೇವರು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವರು. ಆ ದಿವಸಗಳಲ್ಲಿ ಅವರಲ್ಲಿ ಅತ್ಯಂತ ಬಲಹೀನನು ದಾವೀದನಂತೆ ಬಲಾಢ್ಯನಾಗುವನು. ದಾವೀದನ ವಂಶವು ದೇವರ ಹಾಗೆಯೂ, ಮುಂದಾಳಾಗಿ ಯೆಹೋವ ದೇವರ ದೂತನ ಹಾಗೆಯೂ ಇರುವುದು. 9 ಆ ದಿವಸದಲ್ಲಿ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶಮಾಡುವುದಕ್ಕೆ ನಾನು ಹುಡುಕುವೆನು.
10 “ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನು ಮತ್ತು ಮೊರೆಯಿಡುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನು ಅವರು ದೃಷ್ಟಿಸಿನೋಡುವರು. ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ, ಆತನ ನಿಮಿತ್ತ ಗೋಳಾಡುವರು. ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆ ಪಡುವರು. 11 ಆ ದಿವಸದಲ್ಲಿ ಯೆರೂಸಲೇಮಿನಲ್ಲಿ ದೊಡ್ಡ ಗೋಳಾಟವಿರುವುದು. ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೋನಿನ ಗೋಳಾಟದ ಹಾಗೆಯೇ. 12 ದೇಶವು ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾಗಿ ಗೋಳಾಡುವುದು. ದಾವೀದನ ಮನೆಯ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ನಾತಾನನ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; 13 ಲೇವಿಯರ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮೀಯನ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ. 14 ಮತ್ತು ಉಳಿದ ಕುಲಗಳೆಲ್ಲಾ ಪ್ರತ್ಯೇಕವಾಗಿಯೂ, ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು.”
<- ಜೆಕರ್ಯ 11ಜೆಕರ್ಯ 13 ->