ಕೀರ್ತನೆ 125
ಯಾತ್ರಾ ಗೀತೆ. 
 1 ಯೆಹೋವ ದೇವರಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿದ್ದಾರೆ; 
ಆ ಪರ್ವತವು ಯುಗಯುಗಕ್ಕೂ ಕದಲದೆ ಇರುವುದು. 
 2 ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ, 
ಯೆಹೋವ ದೇವರು ಈಗಿನಿಂದ ಯುಗಯುಗಕ್ಕೂ 
ತಮ್ಮ ಜನರ ಸುತ್ತಲೂ ಇದ್ದಾರೆ. 
 3 ನೀತಿವಂತರು ತಮ್ಮ ಕೈಗಳನ್ನು 
ಅನ್ಯಾಯಕ್ಕೆ ಚಾಚದ ಹಾಗೆ, 
ದುಷ್ಟನ ಕೋಲು ನೀತಿವಂತರ 
ಸ್ವಾಸ್ತ್ಯದ ಮೇಲೆ ನೆಲೆಯಾಗಿರುವುದಿಲ್ಲ. 
 4 ಯೆಹೋವ ದೇವರೇ, ಒಳ್ಳೆಯವರಿಗೂ, 
ಯಥಾರ್ಥ ಹೃದಯವುಳ್ಳವರಿಗೂ ಒಳ್ಳೆಯದನ್ನು ಮಾಡುತ್ತಾರೆ. 
 5 ಆದರೆ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು, 
ದುಷ್ಟರ ಸಂಗಡ ದೇವರು ತೊಲಗಿಸಲಿ. 
 Languages
Languages