1 ಯೆಹೋವ ದೇವರು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿವಸದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ.
2 ಆರೋನನ ಮಕ್ಕಳುಗಳ ಹೆಸರುಗಳು: ಚೊಚ್ಚಲ ಮಗನು ನಾದಾಬ್, ತರುವಾಯ ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್. 3 ಯಾಜಕರಾಗಿ ಅಭಿಷೇಕ ಹೊಂದಿದ ಆರೋನನ ಮಕ್ಕಳುಗಳ ಹೆಸರುಗಳು ಇವೇ, ಇವರೇ ಯಾಜಕೋದ್ಯೋಗ ಮಾಡುವುದಕ್ಕೆ ಪ್ರತಿಷ್ಠಿತರಾದವರು. 4 ಆದರೆ ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಅರ್ಪಿಸಿದಾಗ, ಯೆಹೋವ ದೇವರ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ. ಹೀಗೆ ಎಲಿಯಾಜರನು, ಈತಾಮಾರನು ತಮ್ಮ ತಂದೆ ಆರೋನನ ಎದುರಿನಲ್ಲಿ ಯಾಜಕ ಉದ್ಯೋಗವನ್ನು ಮಾಡಿದರು.
5 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 6 “ಲೇವಿಯ ಗೋತ್ರವನ್ನು ಹತ್ತಿರ ಕರೆದು, ಯಾಜಕನಾದ ಆರೋನನ ಮುಂದೆ ನಿಲ್ಲಿಸು. ಅವರು ಅವನಿಗೆ ಸಹಾಯ ಮಾಡಲಿ. 7 ಇದಲ್ಲದೆ ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು ದೇವದರ್ಶನದ ಗುಡಾರದ ಸೇವೆಮಾಡುತ್ತಾ ಆರೋನನಿಗಾಗಿಯೂ ಸಮಸ್ತ ಸಮೂಹದವರಿಗಾಗಿಯೂ ಕರ್ತವ್ಯಗಳನ್ನು ನಿರ್ವಹಿಸಬೇಕು. 8 ಅವರು ದೇವದರ್ಶನದ ಗುಡಾರದ ಎಲ್ಲಾ ಸಲಕರಣೆಗಳನ್ನು ನೋಡಿಕೊಳ್ಳಬೇಕು. ಗುಡಾರದ ಸೇವೆಯನ್ನು ಮಾಡುವ ಮೂಲಕ ಇಸ್ರಾಯೇಲರ ಜವಾಬ್ದಾರಿಗಳನ್ನು ಪೂರೈಸಬೇಕು. 9 ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸು. ಇಸ್ರಾಯೇಲರೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲಾದವರು ಇವರೇ. 10 ಇದಲ್ಲದೆ ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನೂ ಅವನ ಪುತ್ರರನ್ನೂ ನೇಮಿಸಬೇಕು. ಪರಕೀಯನು ಸಮೀಪಿಸಿದರೆ ಸಾಯಬೇಕು.”
11 ಯೆಹೋವ ದೇವರು ಮೋಶೆಗೆ ಹೀಗೆಂದರು: 12 “ಪ್ರತಿಯೊಬ್ಬ ಇಸ್ರಾಯೇಲಿನ ಮಹಿಳೆಯ ಜೇಷ್ಠ ಮಗನಿಗೆ ಬದಲಾಗಿ ಇಸ್ರಾಯೇಲರೊಳಗಿಂದ ಲೇವಿಯರನ್ನು ತೆಗೆದುಕೊಂಡಿದ್ದೇನೆ. ಲೇವಿಯರು ನನಗೆ ಸೇರಿದವರು. 13 ಏಕೆಂದರೆ ಜೇಷ್ಠರಾದವರೆಲ್ಲರೂ ನನ್ನವರೇ. ನಾನು ಈಜಿಪ್ಟ್ ದೇಶದಲ್ಲಿ ಜೇಷ್ಠರಾದವುಗಳನ್ನೆಲ್ಲಾ ಹೊಡೆದ ದಿವಸದಲ್ಲಿ ನಾನು ಇಸ್ರಾಯೇಲರಲ್ಲಿ ಪುರುಷರಾಗಲಿ, ಪಶುಗಳಾಗಲಿ ಚೊಚ್ಚಲಾದ ಪ್ರತಿಯೊಂದನ್ನು ನನಗಾಗಿ ಪ್ರತ್ಯೇಕಿಸಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಯೆಹೋವ ದೇವರು.”
14 ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ ಹೇಳಿದ್ದೇನೆಂದರೆ: 15 “ಲೇವಿಯರನ್ನು ಕುಟುಂಬಗಳಾಗಿಯೂ, ಗೋತ್ರಗಳಾಗಿಯೂ ಎಣಿಕೆ ಮಾಡು. ಒಂದು ತಿಂಗಳು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು,” ಎಂದರು. 16 ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು.
40 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಇಸ್ರಾಯೇಲರಲ್ಲಿರುವ ಜೇಷ್ಠಪುತ್ರರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ. 41 ಇಸ್ರಾಯೇಲರಲ್ಲಿರುವ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲರ ಪಶುಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನೂ ನನಗೋಸ್ಕರ ತೆಗೆದುಕೋ, ‘ನಾನೇ ಯೆಹೋವ ದೇವರು,’ ” ಎಂದರು.
42 ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಮೋಶೆ ಇಸ್ರಾಯೇಲರಲ್ಲಿ ಜೇಷ್ಠರಾಗಿರುವುದೆಲ್ಲವನ್ನು ಎಣಿಸಿದನು. 43 ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಜೇಷ್ಠರಾದವರೆಲ್ಲರ ಒಟ್ಟು ಸಂಖ್ಯೆ 22,273 ಮಂದಿ.
44 ಯೆಹೋವ ದೇವರು ಮೋಶೆಗೆ ಪುನಃ ಹೇಳಿದ್ದೇನೆಂದರೆ, 45 “ಇಸ್ರಾಯೇಲರಲ್ಲಿ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನು ತೆಗೆದುಕೋ. ಲೇವಿಯರು ನನ್ನವರಾಗಿರುವರು. ನಾನೇ ಯೆಹೋವ ದೇವರು. 46 ಇಸ್ರಾಯೇಲರ ಜೇಷ್ಠರಾದವರಲ್ಲಿ ಲೇವಿಯರಿಗಿಂತ ಹೆಚ್ಚಾಗಿರುವ 273 ಮಂದಿಯ ವಿಮೋಚನೆಯ ಕ್ರಯವಾಗಿ 47 ಒಬ್ಬೊಬ್ಬನಿಗೆ ಐದು ಶೆಕೆಲ್[a] ತೆಗೆದುಕೋ. ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, ಅಂದರೆ ಇಪ್ಪತ್ತು ಗೇರಾ ತೂಕದ ಶೆಕೆಲ್ ಈ ಪ್ರಕಾರವಾಗಿ ಇದನ್ನು ತೆಗೆದುಕೊಳ್ಳಬೇಕು. 48 ಅವರೊಳಗೆ ಹೆಚ್ಚಾಗಿರುವವರ ವಿಮೋಚನೆಯ ಕ್ರಯವನ್ನು ಆರೋನನಿಗೂ ಅವನ ಮಕ್ಕಳಿಗೂ ನೀನು ಕೊಡಬೇಕು.”
49 ಹೀಗೆ ಮೋಶೆಯು ಲೇವಿಯರಿಂದ ವಿಮೋಚಿಸಲಾದವರಿಗೆ ಹೆಚ್ಚು ಜನರ ವಿಮೋಚನೆಯ ಕ್ರಯವಾದ ಹಣವನ್ನು ತೆಗೆದುಕೊಂಡನು. 50 ಇಸ್ರಾಯೇಲರಲ್ಲಿ ಜೇಷ್ಠರಾದವರಿಂದ ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ ನಿಗದಿಯಾದ 1,365 ಶೆಕೆಲ್‌ಗಳನ್ನು ತೆಗೆದುಕೊಂಡನು. 51 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ವಿಮೋಚನೆಯ ಹಣವನ್ನು ಆರೋನನಿಗೂ, ಅವನ ಪುತ್ರರಿಗೂ ಕೊಟ್ಟನು.
<- ಅರಣ್ಯಕಾಂಡ 2ಅರಣ್ಯಕಾಂಡ 4 ->-
a 3:47 ಅಂದರೆ ಸುಮಾರು 58 ಗ್ರಾಂ ಬೆಳ್ಳಿ