1 ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ, ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿ ತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು, ಯೆಹೋವ ದೇವರ ಆಲಯಕ್ಕೆ ಹೋದನು. 2 ಇದಲ್ಲದೆ ಅವನು ಅರಮನೆಯ ಮೇಲ್ವಿಚಾರಕನಾಗಿದ್ದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನಾದ ಪ್ರವಾದಿ ಯೆಶಾಯನ ಬಳಿಗೆ ಹೋಗಿರಿ,” ಎಂದು ಹೇಳಿ ಕಳುಹಿಸಿದನು. 3 ಆಗ ಅವರು ಯೆಶಾಯನಿಗೆ, “ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ಅವಮಾನಕರವಾಗಿಯೂ ಇದೆ. ಏಕೆಂದರೆ ಹೆರಿಗೆಯ ಸಮಯವು ಬಂದಿದೆ ಆದರೆ ಹೆರುವುದಕ್ಕೆ ಶಕ್ತಿಯಿಲ್ಲ. 4 ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು, ಎಂಬುದಾಗಿ ಹಿಜ್ಕೀಯನು ಅನ್ನುತ್ತಾನೆ,” ಎಂದು ಹೇಳಿದರು.
5 ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದು ಹೇಳಿದಾಗ, 6 ಯೆಶಾಯನು ಅವರಿಗೆ, “ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಕೇಳಿದಂಥ ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿದಂಥ ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ. 7 ಇಗೋ, ನಾನು ಅವರ ಮೇಲೆ ಆತ್ಮವನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತನ್ನ ದೇಶಕ್ಕೆ ಹಿಂದಿರುಗುವನು. ಇದಲ್ಲದೆ ಅವನು ತನ್ನ ದೇಶದಲ್ಲಿ ಖಡ್ಗಕ್ಕೆ ತುತ್ತಾಗುವಂತೆ ಮಾಡುವೆನು,’ ” ಎಂದು ಹೇಳಿದನು.
8 ಹೀಗೆ ಸೈನ್ಯಾಧಿಕಾರಿಯು ಅಸ್ಸೀರಿಯದ ಅರಸನು ಲಾಕೀಷನ್ನು ಬಿಟ್ಟು ಹೊರಟಿದ್ದಾನೆಂದು ಕೇಳಿದಾಗ, ಅವನು ಲಿಬ್ನಕ್ಕೆ ಹೋಗಿ, ಅಲ್ಲಿ ಅರಸನು ಲಿಬ್ನದವರೊಂದಿಗೆ ಯುದ್ಧಮಾಡುತ್ತಿರುವುದನ್ನು ಕಂಡನು.
9 ಅಷ್ಟರಲ್ಲಿ ಕೂಷನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೊರಟಿದ್ದಾನೆಂಬ ಸುದ್ದಿಯನ್ನು ಅಸ್ಸೀರಿಯದ ಅರಸನು ಕೇಳಿ, 10 “ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮನ್ನು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ ನಿನ್ನನ್ನು ಮೋಸಗೊಳಿಸಾನು. 11 ಇಗೋ, ಅಸ್ಸೀರಿಯದ ಅರಸರು ಸಮಸ್ತ ದೇಶಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ನೀನು ಕೇಳಿದಿಯಲ್ಲಾ. ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವೆಯೋ? 12 ನನ್ನ ಪಿತೃಗಳು ಹಾಳುಮಾಡಿದ ಗೋಜಾನ್, ಹಾರಾನ್, ರೆಜೆಫ್ ಮುಂತಾದ ದೇವರುಗಳು ಅವರನ್ನು ಬಿಡುಗಡೆ ಮಾಡಲಿಲ್ಲ. ತೆಲ್ ಅಸ್ಸಾರ್ ಎಂಬಲ್ಲಿದ್ದ ಏದೆನಿನ ಜನರನ್ನು ಈ ದೇವರುಗಳು ಅವರನ್ನು ರಕ್ಷಿಸಲು ಸಾಧ್ಯವಾಯಿತೇ? 13 ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ, ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ,” ಎಂದು ಪತ್ರ ಬರೆದು ದೂತರ ಮುಖಾಂತರ ಕಳುಹಿಸಿದನು.
14 ಹಿಜ್ಕೀಯನು ಆ ದೂತರ ಕೈಯಿಂದ ಪತ್ರವನ್ನು ತೆಗೆದುಕೊಂಡು ಓದಿದನು, ಅನಂತರ ಯೆಹೋವ ದೇವರ ಆಲಯಕ್ಕೆ ಹೋಗಿ ಅದನ್ನು ಯೆಹೋವ ದೇವರ ಮುಂದೆ ತೆರೆದಿಟ್ಟನು. 15 ಇದಲ್ಲದೆ ಹಿಜ್ಕೀಯನು ಯೆಹೋವ ದೇವರ ಮುಂದೆ ಪ್ರಾರ್ಥನೆಮಾಡಿ ಹೇಳಿದ್ದೇನೆಂದರೆ, 16 “ಸೇನಾಧೀಶ್ವರ ಯೆಹೋವ ದೇವರೇ, ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ. 17 ಯೆಹೋವ ದೇವರೇ, ನಿಮ್ಮ ಕಿವಿಗೊಟ್ಟು ಕೇಳಿರಿ. ಯೆಹೋವ ದೇವರೇ, ನಿಮ್ಮ ಕಣ್ಣುಗಳನ್ನು ತೆರೆದು ನೋಡಿರಿ. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತುಗಳನ್ನು ಕೇಳಿರಿ.
18 “ಯೆಹೋವ ದೇವರೇ, ಅಸ್ಸೀರಿಯದ ಅರಸರು ಸಕಲ ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ, ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ. 19 ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳಷ್ಟೆ, ಆದ್ದರಿಂದಲೇ ಅವರು ಅವುಗಳನ್ನು ನಾಶಮಾಡಿದ್ದಾರೆ. 20 ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು.
21 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನೆಂದರೆ, “ನೀನು ಅಸ್ಸೀರಿಯದ ಅರಸನಾದ ಸನ್ಹೇರೀಬನನ್ನು ಕುರಿತು, ಇಸ್ರಾಯೇಲಿನ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದ್ದನ್ನು ಕೇಳಿ, 22 ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ:
30 “ಹಿಜ್ಕೀಯನೇ,
33 “ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ:
36 ಆಗ ಯೆಹೋವ ದೇವರ ದೂತನು ಹೊರಟುಬಂದು ಅಸ್ಸೀರಿಯದ ದಂಡಿನಲ್ಲಿದ್ದ 1,85,000 ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ, ಇಗೋ, ಅವರೆಲ್ಲರು ಸತ್ತು ಹೆಣಗಳಾಗಿದ್ದರು. 37 ಆಗ ಅಸ್ಸೀರಿಯದ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.
38 ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಆಲಯದಲ್ಲಿ ಆರಾಧನೆ ಮಾಡುತ್ತಿರುವಾಗ, ಅವನ ಮಕ್ಕಳಾದ ಅದ್ರಮ್ಮೆಲೆಕ್, ಸರೆಚೆರ್ ಎಂಬವರು ಅವನನ್ನು ಖಡ್ಗದಿಂದ ಕೊಂದು, ಅರಾರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.
<- ಯೆಶಾಯ 36ಯೆಶಾಯ 38 ->