1 ಮೋಶೆಯು ಇಸ್ರಾಯೇಲರ ಸಮೂಹವನ್ನು ಒಟ್ಟುಗೂಡಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವ ದೇವರು ನಿಮಗೆ ಹೀಗೆ ಆಜ್ಞಾಪಿಸಿದ್ದಾರೆ. 2 ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧವಾಗಿರಬೇಕು. ಅದು ಯೆಹೋವ ದೇವರ ಸಬ್ಬತ್ ದಿನ. ಆ ದಿನದಲ್ಲಿ ಕೆಲಸಮಾಡುವವರಿಗೆ ಮರಣದಂಡನೆಯಾಗಬೇಕು. 3 ಸಬ್ಬತ್ ದಿನದಲ್ಲಿ ನೀವು ವಾಸಮಾಡುವ ಯಾವ ಮನೆಯಲ್ಲಿಯೂ ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
4 ಮೋಶೆಯು ಇಸ್ರಾಯೇಲರ ಇಡೀ ಸಮೂಹಕ್ಕೆ ಹೇಳಿದ್ದು: “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ. 5 ನಿಮ್ಮಲ್ಲಿರುವದರಿಂದ ಯೆಹೋವ ದೇವರಿಗೆ ಕಾಣಿಕೆಯನ್ನು ಅರ್ಪಿಸಿರಿ. ಯಾರ‍್ಯಾರಿಗೆ ಇಷ್ಟವಿದೆಯೋ ಅವರು,
10 “ನಿಮ್ಮಲ್ಲಿರುವ ಶಿಲ್ಪಿಗಳೆಲ್ಲರೂ ಬಂದು, ಯೆಹೋವ ದೇವರು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು. ಅವು ಯಾವುವೆಂದರೆ:
20 ಆಗ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಯ ಸನ್ನಿಧಿಯಿಂದ ಹೊರಟು ಹೋದರು. 21 ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು. 22 ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮೂಗುತಿಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಜನರೆಲ್ಲಾ ಚಿನ್ನವನ್ನು ವಿಶೇಷ ಕಾಣಿಕೆಗಳನ್ನಾಗಿ ಯೆಹೋವ ದೇವರಿಗೆ ಅರ್ಪಿಸಿದರು. 23 ನೀಲಿ, ಧೂಮ್ರ, ರಕ್ತವರ್ಣ ದಾರಗಳೂ ನಯವಾದ ನಾರುಮಡಿ, ಮೇಕೆಯ ಕೂದಲು, ಟಗರುಗಳ ಕೆಂಪು ಬಣ್ಣದ ಚರ್ಮಗಳೂ ಕಡಲುಹಂದಿಯ ಚರ್ಮಗಳೂ ಯಾರ ಬಳಿಯಲ್ಲಿದ್ದವೋ ಅವರೆಲ್ಲರೂ ತಂದರು. 24 ಬೆಳ್ಳಿ, ಕಂಚುಗಳ ಕಾಣಿಕೆಗಳನ್ನು ಅರ್ಪಿಸುವುದಕ್ಕೆ ಮನಸ್ಸಿದ್ದವರೆಲ್ಲರೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸಕ್ಕೋಸ್ಕರ ಜಾಲಿ ಮರವಿದ್ದವರು ಅದನ್ನು ತಂದರು. 25 ಕುಶಲತೆ ಬಲ್ಲ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ದಾರಗಳನ್ನು ಮತ್ತು ನಯವಾದ ನಾರುಮಡಿಯನ್ನು ತಂದರು. 26 ಕುಶಲತೆ ಬಲ್ಲ ಎಲ್ಲಾ ಸ್ತ್ರೀಯರು ಮೇಕೆ ಕೂದಲುಗಳನ್ನು ನೇಯ್ದರು. 27 ಅಧಿಪತಿಗಳು ಏಫೋದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವುದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ 28 ಸುಗಂಧದ್ರವ್ಯಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆಯನ್ನೂ ತಂದರು. 29 ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.
30 ಆಗ ಮೋಶೆಯು ಇಸ್ರಾಯೇಲರಿಗೆ, “ನೋಡಿರಿ, ಯೆಹೋವ ದೇವರು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ಆರಿಸಿಕೊಂಡಿದ್ದಾರೆ, 31 ಅವರು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ 32 ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದರಲ್ಲಿಯೂ 33 ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸದ ಜ್ಞಾನದಿಂದಲೂ ಅವನನ್ನು ತುಂಬಿಸಿದ್ದಾರೆ. 34 ಇದಲ್ಲದೆ ಕಲಿಸುವುದಕ್ಕೆ ಅವನಿಗೆ ಮತ್ತು ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದಾರೆ. 35 ಕೆತ್ತನೆಯ ಕೆಲಸಗಳನ್ನು, ವಿನ್ಯಾಸದ ಕೆಲಸಗಳನ್ನು, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ, ನಯವಾದ ನಾರುಬಟ್ಟೆ ಇವುಗಳಲ್ಲಿ ಕಸೂತಿ ಕೆಲಸಗಳನ್ನು ಮಾಡುವುದಕ್ಕೆ ಮತ್ತು ನೇಯ್ಗೆಯ ಕೆಲಸ ಮಾಡುವುದಕ್ಕೆ ಎಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಯೆಹೋವ ದೇವರು ಅವರಿಗೆ ಜ್ಞಾನವನ್ನು ಅನುಗ್ರಹಿಸಿದ್ದಾರೆ.
<- ವಿಮೋಚನಕಾಂಡ 34ವಿಮೋಚನಕಾಂಡ 36 ->