1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ನೀನು, ನಿನ್ನ ಮನೆಯವರು ಎದ್ದು ಎಲ್ಲಿ ಇಳಿದುಕೊಳ್ಳುವ ಸ್ಥಳ ಉಂಟೋ ಅಲ್ಲಿ ಹೋಗಿ ವಾಸಿಸಿರಿ. ಏಕೆಂದರೆ ಯೆಹೋವ ದೇವರು ಬರವನ್ನು ಕಳುಹಿಸಲಿದ್ದಾರೆ. ಅದು ದೇಶದ ಮೇಲೆ ಏಳು ವರ್ಷದವರೆಗೂ ಬರುವುದು,” ಎಂದು ಹೇಳಿದನು. 2 ಆಗ ಆ ಸ್ತ್ರೀಯು ಎದ್ದು ದೇವರ ಮನುಷ್ಯನ ಮಾತಿನ ಪ್ರಕಾರವೇ ಮಾಡಿ, ತನ್ನ ಮನೆಯವರ ಸಂಗಡ ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷ ವಾಸವಾಗಿದ್ದಳು.
3 ಏಳು ವರ್ಷ ಆದ ತರುವಾಯ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರುಗಿಬಂದು ತನ್ನ ಹೊಲಮನೆಗಳಿಗೋಸ್ಕರ ಅರಸನಿಗೆ ಮೊರೆಯಿಟ್ಟಳು. 4 ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡಿ, “ಎಲೀಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರಿಸು,” ಎಂದು ಅವನಿಗೆ ಹೇಳಿದನು. 5 ಗೇಹಜಿಯು ಸತ್ತ ಹುಡುಗನನ್ನು ಹೇಗೆ ಎಲೀಷನು ಬದುಕಿಸಿದನೆಂದು ಅರಸನಿಗೆ ವಿವರವಾಗಿ ಹೇಳುತ್ತಿರುವಾಗಲೇ, ಎಲೀಷನು ಬದುಕಿಸಿದ ಹುಡುಗನ ತಾಯಿಯು ತನ್ನ ಹೊಲಮನೆಗೋಸ್ಕರ, ಮೊರೆಯಿಡಲು ಅರಸನ ಬಳಿಗೆ ಬಂದಳು.
7 ಅರಾಮಿನ ಅರಸನಾದ ಬೆನ್ಹದದನು ಅಸ್ವಸ್ಥನಾಗಿರುವಾಗ ಎಲೀಷನು ದಮಸ್ಕಕ್ಕೆ ಬಂದನು. “ದೇವರ ಮನುಷ್ಯನು ಇಲ್ಲಿಗೆ ಬಂದಿದ್ದಾನೆ,” ಎಂದು ಅವನಿಗೆ ತಿಳಿಸಲಾಯಿತು. 8 ಆಗ ಅರಸನು ಹಜಾಯೇಲನಿಗೆ, “ನೀನು ಕೈಯಲ್ಲಿ ಕಾಣಿಕೆಯನ್ನು ತೆಗೆದುಕೊಂಡುಹೋಗಿ ದೇವರ ಮನುಷ್ಯನನ್ನು ಎದುರುಗೊಂಡು, ಈ ವ್ಯಾಧಿಯಿಂದ ನಾನು ಗುಣವಾಗುವೆನೋ? ಎಂದು ಅವನಿಂದ ಯೆಹೋವ ದೇವರನ್ನು ವಿಚಾರಿಸು,” ಎಂದನು.
9 ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮವಾದವುಗಳಲ್ಲಿ ನಲವತ್ತು ಒಂಟೆಗಳು ಹೊರುವಷ್ಟು ಕಾಣಿಕೆಗಳನ್ನು ತೆಗೆದುಕೊಂಡು, ಎಲೀಷನನ್ನು ಎದುರುಗೊಳ್ಳಲು ಹೋಗಿ, ಅವನ ಮುಂದೆ ಬಂದು ನಿಂತು, “ಅರಾಮಿನ ಅರಸನಾಗಿರುವ ನಿನ್ನ ಮಗ ಬೆನ್ಹದದನು, ‘ಈ ವ್ಯಾಧಿಯಿಂದ ಬದುಕುವೆನೋ?’ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ,” ಎಂದನು.
10 ಅದಕ್ಕೆ ಎಲೀಷನು, “ನೀನು ಹೋಗಿ ಅವನಿಗೆ, ನಿಜವಾಗಿಯೂ ಸ್ವಸ್ಥನಾಗುವೆ, ಎಂದು ಹೇಳು. ಆದರೆ ಅವನು ಸಾಯುವನೆಂದು ಯೆಹೋವ ದೇವರು ನನಗೆ ತೋರಿಸಿದ್ದಾರೆ,” ಎಂದನು. 11 ದೇವರ ಮನುಷ್ಯನಾದ ಎಲೀಷನು ಹಜಾಯೇಲನು ಮುಜುಗರಕ್ಕೆ ಒಳಗಾಗುವವರೆಗೂ ಅವನನ್ನು ದಿಟ್ಟಿಸಿ ನೋಡುತ್ತಿದ್ದನು. ನಂತರ ದೇವರ ಮನುಷ್ಯನು ಅಳತೊಡಗಿದನು.
12 ಆಗ ಹಜಾಯೇಲನು, “ನನ್ನ ಒಡೆಯನು ಅಳುವುದೇಕೆ?” ಎಂದನು.
13 ಆದರೆ ಹಜಾಯೇಲನು, “ನಿಮ್ಮ ಸೇವಕನು ಕೇವಲ ನಾಯಿ, ಇಂಥಾ ಮಹಾ ಕೆಲಸವನ್ನು ಮಾಡುವುದಕ್ಕೆ ಹೇಗೆ ಸಾಧ್ಯ?” ಎಂದನು.
14 ಹಜಾಯೇಲನು ಎಲೀಷನನ್ನು ಬಿಟ್ಟು ಹೊರಟು ತನ್ನ ಯಜಮಾನನ ಬಳಿಗೆ ಬಂದನು. ಆಗ ಅವನು, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದ್ದಕ್ಕೆ ಹಜಾಯೇಲನು, “ನೀನು ನಿಜವಾಗಿ ಬದುಕುವೆ ಎಂದು ನನಗೆ ಹೇಳಿದನು,” ಎಂದನು. 15 ಆದರೆ ಮಾರನೆಯ ದಿವಸದಲ್ಲಿ, ಅವನು ದಪ್ಪ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಅರಸನ ಮುಖದ ಮೇಲೆ ಹಾಕಿದ್ದರಿಂದ ಅವನು ಮರಣಹೊಂದಿದನು. ಹಜಾಯೇಲನು ಅವನಿಗೆ ಬದಲಾಗಿ ಅರಸನಾದನು.
16 ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ, ಯೆಹೂದದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು. 17 ಅವನು ಆಳಲಾರಂಭಿಸಿದಾಗ, ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು. 18 ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. 19 ಆದರೂ ಯೆಹೋವ ದೇವರು ಯೆಹೂದದ ರಾಜ್ಯವನ್ನು ನಾಶಮಾಡಲಿಲ್ಲ. “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂಬುದಾಗಿ ತಮ್ಮ ದಾಸನಾದ ದಾವೀದನಿಗೆ ಪ್ರಮಾಣ ಮಾಡಿದ ಕಾರಣ ಉಳಿಸಿದರು.
20 ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು. 21 ಆದ್ದರಿಂದ ಯೆಹೋರಾಮನು[a] ತನ್ನ ಬಳಿಯಲ್ಲಿದ್ದ ಎಲ್ಲಾ ರಥಬಲವನ್ನು ತೆಗೆದುಕೊಂಡು ಚಾಯೀರಿಗೆ ಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ ತನ್ನ ರಥಗಳ ಅಧಿಪತಿಗಳನ್ನೂ ಎದೋಮ್ಯರನ್ನು ಸೋಲಿಸಿದನು. ಅವನ ಸೈನಿಕರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. 22 ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಅದೇ ಕಾಲದಲ್ಲಿ ಲಿಬ್ನದವರೂ ಸ್ವತಂತ್ರರಾದರು.
23 ಯೆಹೋರಾಮನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 24 ಯೆಹೋರಾಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.
25 ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು. 26 ಇವನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಒಂದು ವರ್ಷ ಆಳಿದನು. ಇವನ ತಾಯಿಯ ಹೆಸರು ಅತಲ್ಯಳು, ಅವಳು ಇಸ್ರಾಯೇಲಿನ ಅರಸನಾದ ಒಮ್ರಿಯ ಮೊಮ್ಮಗಳು. 27 ಇವನು ಅಹಾಬನ ಮನೆಯವರ ಮಾರ್ಗಗಳಲ್ಲಿ ನಡೆದು, ಅಹಾಬನ ಮನೆಯವರ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಏಕೆಂದರೆ ಇವನು ಅಹಾಬನ ಅಳಿಯನಾಗಿದ್ದನು.
28 ಅಹಜ್ಯನು ಅಹಾಬನ ಮಗ ಯೋರಾಮನ ಸಂಗಡ ಗಿಲ್ಯಾದಿನ ರಾಮೋತಿಗೆ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದು ಗಾಯಗೊಳಿಸಿದರು. 29 ಆದ್ದರಿಂದ ಅರಸನಾದ ಯೋರಾಮನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು.
-
a 8:21 ಯೆಹೋರಾಮ ಅಥವಾ ಯೋರಾಮ