1 ಹನ್ನಳು ಪ್ರಾರ್ಥಿಸಿ ಹೇಳಿದ್ದೇನೆಂದರೆ,
11 ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು. ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಯೆಹೋವ ದೇವರ ಸೇವೆ ಮಾಡುತ್ತಿದ್ದನು.
12 ಆದರೆ ಏಲಿಯ ಪುತ್ರರು ಯೆಹೋವ ದೇವರನ್ನು ಗೌರವಿಸದೆ ದುಷ್ಟರಾಗಿದ್ದರು. 13 ಆ ಯಾಜಕರು ಜನರನ್ನು ನಡೆಸಿದ ವಿಧ ಏನೆಂದರೆ: ಯಾವನಾದರೂ ಬಲಿ ಅರ್ಪಿಸಿದರೆ, ಆ ಅರ್ಪಿಸಿದ ಬಲಿಯ ಮಾಂಸವನ್ನು ಬೇಯಿಸುವಾಗ, ಯಾಜಕನ ಸೇವಕನು ಮೂರು ಶೂಲವುಳ್ಳ ಆಯುಧವನ್ನು ತೆಗೆದುಕೊಂಡು ಬಂದು, 14 ಅದನ್ನು ತಪ್ಪಲೆಯಲ್ಲಾಗಲಿ, ಪಾತ್ರೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚುವನು. ಆ ಆಯುಧದಲ್ಲಿ ಬರುವುದನ್ನೆಲ್ಲಾ ಯಾಜಕನು ತನಗೆ ತೆಗೆದುಕೊಳ್ಳುವನು. ಹೀಗೆಯೇ ಅವರು ಶೀಲೋವಿನಲ್ಲಿ ಅಲ್ಲಿಗೆ ಬರುವ ಸಮಸ್ತ ಇಸ್ರಾಯೇಲರಿಗೆ ಮಾಡಿದರು. 15 ಇದಲ್ಲದೆ ಕೊಬ್ಬನ್ನು ಬಲಿ ಅರ್ಪಿಸುವುದಕ್ಕಿಂತ ಮುಂಚೆ ಯಾಜಕನ ಸೇವಕನು ಬಂದು, ಬಲಿಯನ್ನು ಅರ್ಪಿಸುವವನ ಸಂಗಡ, “ಯಾಜಕನಿಗೆ ಸುಡುವುದಕ್ಕೆ ಮಾಂಸವನ್ನು ಕೊಡು. ಅವನು ನಿನ್ನ ಕೈಯಿಂದ ಬೆಂದ ಮಾಂಸವನ್ನು ತೆಗೆದುಕೊಳ್ಳುವುದಿಲ್ಲ. ಅದು ಹಸಿಯಾಗಿರಬೇಕು,” ಎನ್ನುತ್ತಿದ್ದನು.
16 “ಮೊದಲು ಕೊಬ್ಬನ್ನು ಸುಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ,” ಎಂದು ಯಾರಾದರೂ ಹೇಳಿದರೆ; ಸೇವಕನು, “ಇಲ್ಲ ಈಗಲೇ ಕೊಡು. ನೀನು ಕೊಡದಿದ್ದರೆ, ನಾನು ಒತ್ತಾಯದಿಂದ ತೆಗೆದುಕೊಳ್ಳುವೆನು,” ಎನ್ನುತ್ತಿದ್ದನು.
17 ಈ ಯುವಕರ ಪಾಪವು ಯೆಹೋವ ದೇವರ ದೃಷ್ಟಿಯಲ್ಲಿ ಅಧಿಕವಾಗಿತ್ತು. ಏಕೆಂದರೆ ಅವರು ಯೆಹೋವ ದೇವರ ನೈವೇದ್ಯವನ್ನು ತುಚ್ಛವಾಗಿ ಕಂಡರು.
18 ಬಾಲಕನಾದ ಸಮುಯೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಯೆಹೋವ ದೇವರ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದನು. 19 ಅವನ ತಾಯಿ ಪ್ರತಿ ವರುಷದಲ್ಲೂ ವರುಷದ ಬಲಿಯನ್ನು ಅರ್ಪಿಸಲು ತನ್ನ ಗಂಡನ ಸಂಗಡ ಬರುವಾಗ, ಅವನಿಗೆ ಒಂದು ಚಿಕ್ಕ ನಿಲುವಂಗಿಯನ್ನು ಮಾಡಿಕೊಂಡು ಬರುವಳು. 20 ಆಗ ಏಲಿಯು ಎಲ್ಕಾನನನ್ನೂ, ಅವನ ಹೆಂಡತಿಯನ್ನೂ, “ಯೆಹೋವ ದೇವರಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ಯೆಹೋವ ದೇವರು ನಿನಗೆ ಬೇರೆ ಮಕ್ಕಳನ್ನು ದಯಪಾಲಿಸಲಿ,” ಎಂದು ಆಶೀರ್ವದಿಸುತ್ತಿದ್ದನು. ಅನಂತರ ಅವರು ತಿರುಗಿ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. 21 ಹಾಗೆಯೇ ಯೆಹೋವ ದೇವರು ಹನ್ನಳಿಗೆ ಕೃಪೆ ತೋರಿಸಿದ್ದರಿಂದ, ಅವಳು ಗರ್ಭಧರಿಸಿ ಮೂವರು ಪುತ್ರರನ್ನೂ, ಇಬ್ಬರು ಪುತ್ರಿಯರನ್ನೂ ಹೆತ್ತಳು. ಇದಲ್ಲದೆ ಬಾಲಕನಾದ ಸಮುಯೇಲನು ಯೆಹೋವ ದೇವರ ಸನ್ನಿಧಿಯಲ್ಲಿ ಬೆಳೆಯುತ್ತಿದ್ದನು.
22 ಏಲಿಯು ಬಹಳ ವೃದ್ಧನಾಗಿದ್ದನು. ಅವನು ತನ್ನ ಪುತ್ರರು ಇಸ್ರಾಯೇಲ್ ಜನರಿಗೆ ಮಾಡುವುದೆಲ್ಲವನ್ನೂ, ಅವರು ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬುದನ್ನೂ ಕೇಳಿ ಅವರಿಗೆ, 23 “ನೀವು ಇಂಥಾ ಕಾರ್ಯಗಳನ್ನು ಮಾಡುವುದೇನು? ನಾನು ಎಲ್ಲ ಜನರಿಂದ ಈ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ. 24 ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ. ಏಕೆಂದರೆ ಯೆಹೋವ ದೇವರ ಜನರಲ್ಲಿ ನೀವು ಮಾಡಿರುವ ಕಾರ್ಯಗಳ ವರ್ತಮಾನವು ಹರಡಿದ್ದು ಒಳ್ಳೆಯದಲ್ಲ. 25 ಮನುಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ, ದೇವರು ಅಪರಾಧಿಗಾಗಿ ಮಧ್ಯಸ್ಥಿಕೆಯನ್ನು ವಹಿಸುವರು. ಆದರೆ ಒಬ್ಬನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದರೆ, ಅವನಿಗೋಸ್ಕರ ವಿಜ್ಞಾಪನೆ ಮಾಡತಕ್ಕವರು ಯಾರು?” ಎಂದನು. ಆದರೂ ಅವರು ತಮ್ಮ ತಂದೆಯ ಮಾತನ್ನು ಕೇಳದೆ ಹೋದರು. ಯೆಹೋವ ದೇವರು ಅವರನ್ನು ಮರಣದಂಡನೆಗೆ ಒಪ್ಪಿಸಬೇಕೆಂದಿದ್ದರು.
26 ಆದರೆ ಬಾಲಕನಾದ ಸಮುಯೇಲನು ನಿಲುವಿನಿಂದಲೂ ಯೆಹೋವ ದೇವರ ಕೃಪೆಯಲ್ಲಿಯೂ ಜನರೊಂದಿಗೂ ಬೆಳೆಯುತ್ತಾ ಬಂದನು.
27 ದೇವರ ಮನುಷ್ಯನು ಏಲಿಯ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ನಿನಗೆ ಹೇಳುವದೇನೆಂದರೆ: ‘ನಿನ್ನ ತಂದೆಯ ಮನೆಯವರು ಈಜಿಪ್ಟಿನಿಂದ ಫರೋಹನ ಮನೆಯೊಳಗೆ ಇರುವಾಗ, ನಾನು ಅವರಿಗೆ ಪ್ರತ್ಯಕ್ಷವಾದದ್ದು ಸ್ಪಷ್ಟವಾಗಲಿಲ್ಲವೋ? 28 ನನ್ನ ಬಲಿಪೀಠದ ಮೇಲೆ ಬಲಿಯನ್ನು ಅರ್ಪಿಸುವುದಕ್ಕೂ, ಧೂಪವನ್ನು ಸುಡುವುದಕ್ಕೂ, ನನ್ನ ಮುಂದೆ ಏಫೋದನ್ನು ಧರಿಸಿಕೊಂಡಿರುವುದಕ್ಕೂ, ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರಬೇಕೆಂದು ನಾನು ಅವನನ್ನು ಆಯ್ದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲರು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ? 29 ನನ್ನ ಜನರಾದ ಇಸ್ರಾಯೇಲರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವುದಕ್ಕೆ ನನ್ನ ವಾಸಸ್ಥಳದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ, ಅರ್ಪಣೆಯನ್ನೂ ನೀವು ಒದ್ದು, ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವುದೇನು?’
30 “ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಅದು ದೂರವಾಗಿರಲಿ. ಏಕೆಂದರೆ ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು. ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು. 31 ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟದಹಾಗೆ, ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿನಗಳು ಬರುವುವು. 32 ಇದಲ್ಲದೆ ಇಸ್ರಾಯೇಲಿಗೆ ಮಾಡುವ ಸಕಲ ಉತ್ತಮವಾದವುಗಳಿಗೆ ಬದಲಾಗಿ, ನೀನು ನನ್ನ ವಾಸಸ್ಥಳದಲ್ಲಿ ಒಬ್ಬ ವೈರಿಯನ್ನು ಕಾಣುವೆ. ಎಂದಿಗೂ ನಿನ್ನ ಮನೆಯಲ್ಲಿ ಒಬ್ಬ ವೃದ್ಧನೂ ಇರುವುದಿಲ್ಲ. 33 ನನ್ನ ಬಲಿಪೀಠದ ಸೇವೆಯಿಂದ ನಾನು ತೆಗೆದು ಬಿಡದ ಮನುಷ್ಯನು, ನಿನ್ನ ಕಣ್ಣುಗಳನ್ನು ಕುಂದಿಸಿ, ನಿನ್ನ ಹೃದಯವನ್ನು ವೇದನೆ ಪಡಿಸುವುದಕ್ಕೆ ಇರುವನು. ನಿನ್ನ ಮನೆಯ ಸಂತತಿಯವರೆಲ್ಲಾ ಯೌವನ ಪ್ರಾಯದಲ್ಲಿಯೇ ಖಡ್ಗದಿಂದ ಸಾಯುವರು.
34 “ ‘ಇದಲ್ಲದೆ ನಿನಗೆ ಗುರುತಾಗಿ ಹೊಫ್ನಿಯು, ಫೀನೆಹಾಸನು ಎಂಬ ಇಬ್ಬರು ಮಕ್ಕಳು ಒಂದೇ ದಿವಸದಲ್ಲಿ ಸಾಯುವರು. 35 ಆದರೆ ನನ್ನ ಹೃದಯಕ್ಕೂ, ನನ್ನ ಮನಸ್ಸಿಗೂ ಸಮರ್ಪಕವಾದದ್ದನ್ನೇ ಮಾಡುವ ನಂಬಿಗಸ್ತನಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ, ಅವನಿಗೆ ಸ್ಥಿರವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ಸೇವೆಮಾಡುವನು. 36 ಆಗ ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡಬಿದ್ದು, ಒಂದು ಬೆಳ್ಳಿಯ ಹಣವನ್ನೂ, ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ, “ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆಯಲ್ಲಿ ಸೇರಿಸಿಕೋ, ಎಂದು ಹೇಳುವರು,” ಎಂದರು.’ ”
<- 1 ಸಮುಯೇಲ 11 ಸಮುಯೇಲ 3 ->-
a 2:1 ಕೊಂಬು ಎಂಬ ಪದವು ಬಲದ ಸಂಕೇತವನ್ನು ಸೂಚಿಸುತ್ತದೆ