13 ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ [r]ತನ್ನ ಮೇಲೆ ಆಣೆಯಿಟ್ಟು, 14 “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು” ಎಂದು ಹೇಳಿದನಷ್ಟೆ. 15 ಹೀಗೆ [s]ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು. 16 ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, [t]ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು. 17 ಹಾಗೆಯೇ ದೇವರು [u]ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, [v]ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು. 18 ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, [~23~]ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು. 19 [~24~]ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ [~25~]ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ [~26~]ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ. 20 ಅಲ್ಲಿಗೆ [~27~]ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, [~28~]ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ.
<- ಇಬ್ರಿಯರಿಗೆ 5ಇಬ್ರಿಯರಿಗೆ 7 ->*6:1-2 6:1-2 ಇಬ್ರಿ. 9:14:
†6:1-2 6:1-2 ಅ. ಕೃ. 19:4,5.
‡6:1-2 6:1-2 ಅ. ಕೃ. 8:17; 19:6:
§6:1-2 6:1-2 ಅ. ಕೃ. 17:31, 32:
*6:1-2 6:1-2 ಅ. ಕೃ. 10:42; 17:31; 2 ಕೊರಿ 5:10:
†6:1-2 6:1-2 ಇಬ್ರಿ. 5:12; ಫಿಲಿ. 3:12-14:
g 6:4 ಇಬ್ರಿ. 10:32: h 6:4 ಯೋಹಾ 4:10; ಎಫೆ 2:8: i 6:4 ಗಲಾ. 3:2, 5: j 6:6 1 ಯೋಹಾ 5:16: k 6:6 ಇಬ್ರಿ. 10:29: l 6:8 ಯೆಶಾ 5:1-7; ಲೂಕ 13:6-9: m 6:8 ಮಲಾ. 4:1; ಯೋಹಾ 15:6: n 6:10 ರೋಮಾ. 15:31; 2 ಕೊರಿ 8:4; 9:1, 12; 2 ತಿಮೊ. 1:18; ಪ್ರಕ 2:19: o 6:10 ಜ್ಞಾ. 19:17; ಮತ್ತಾ 10:42; 25:40; ಮಾರ್ಕ 9:41: p 6:11 ರೋಮಾ. 5:2-5: q 6:12 ಇಬ್ರಿ. 13:7; ಇಬ್ರಿ. 10:36; 13:7: r 6:13 ಆದಿ 22:16, 17: s 6:15 ರೋಮಾ. 4:13: t 6:16 ವಿಮೋ 22:11: u 6:17 ವ. 18; ಕೀರ್ತ 110:4; ಜ್ಞಾ. 19:21: v 6:17 ಇಬ್ರಿ. 11:9: ~23~ 6:18 ಇಬ್ರಿ. 12:1,2. ~24~ 6:19 ತೀತ. 1:2: ~25~ 6:19 ಅಂದರೆ ಆಧಾರವಾಗಿರುವುದು. ~26~ 6:19 ಇಬ್ರಿ. 9:7; ಯಾಜ 16:15: ~27~ 6:20 ಇಬ್ರಿ. 3:1; 5:6, 10; 7:17, 21 ~28~ 6:20 ಇಬ್ರಿ. 4:14; 8:1; 9:24: