2 ಅವನು ತಮ್ಮ ಸಂಗಡ ಇಬ್ರಿಯ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿ ಅವರು ಮತ್ತಷ್ಟು ನಿಶ್ಯಬ್ದವಾದರು. ಆಗ ಅವನು ಹೇಳಿದ್ದೇನಂದರೆ;
3 “ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ, ನಮ್ಮ ಪೂರ್ವಿಕರ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಣವನ್ನು ಪಡೆದವನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ, ನಾನೂ ಅಭಿಮಾನಿಯಾಗಿದ್ದೆನು. 4 ಈ ಮಾರ್ಗದವರನ್ನು ಹಿಂಸಿಸುವವನಾಗಿ ಗಂಡಸರಿಗೂ, ಹೆಂಗಸರಿಗೂ ಬೇಡಿಹಾಕಿಸುತ್ತಾ, ಅವರನ್ನು ಸೆರೆಮನೆಗಳಿಗೆ ಹಾಕಿಸುತ್ತಾ ಇದ್ದೆನು, ಕೊಲೆ ಮಾಡಲಿಕ್ಕೂ ಹಿಂಜರಿಯದೆ ಹಿಂಸಿಸುತ್ತಿದ್ದೆನು. 5 ಈ ವಿಷಯದಲ್ಲಿ ಮಹಾಯಾಜಕನೂ, ಹಿರೀಸಭೆಯರೆಲ್ಲರೂ ಸಾಕ್ಷಿಗಳಾಗಿದ್ದಾರೆ; ಅವರಿಂದಲೇ ನಾನು ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ಬೇಡಿಗಳಿಂದ ಬಂಧಿಸಿ ದಂಡನೆಗಾಗಿ ಯೆರೂಸಲೇಮಿಗೆ ತರಬೇಕೆಂದು ಹೊರಟವನು.
6 “ನಾನು ಪ್ರಯಾಣಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬಂದಾಗ ಸುಮಾರು ಮಧ್ಯಾಹ್ನದಲ್ಲಿ ಫಕ್ಕನೆ ಆಕಾಶದೊಳಗಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲು ಹೊಳೆಯಿತು, ನಾನು ನೆಲಕ್ಕೆ ಬಿದ್ದೆನು. 7 ಆಗ;
8 “ ‘ಅದಕ್ಕೆ ನಾನು; ಕರ್ತನೇ, ನೀನಾರು?’ ಎಂದು ಕೇಳಲು ಆತನು;
10 “ಆಗ ನಾನು; ‘ಕರ್ತನೇ, ನಾನೇನು ಮಾಡಬೇಕು’? ಎಂದು ಕೇಳಲು ಕರ್ತನು ನನಗೆ;
12 “ಅಲ್ಲಿ ಧರ್ಮಶಾಸ್ತ್ರಕ್ಕೆ ಸರಿಯಾಗಿ ನಡೆಯುವ ದೈವಭಕ್ತನೂ, ಆ ಸ್ಥಳದ ಯೆಹೂದ್ಯರೆಲ್ಲರಿಂದ 13 ಒಳ್ಳೆಯವನೆಂದು ಹೆಸರು ಹೊಂದಿದವನೂ ಆಗಿದ್ದ ಅನನೀಯನೆಂಬವನು ನನ್ನ ಬಳಿಗೆ ಬಂದು, ನಿಂತು; ‘ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದಿಕೋ’ ಎಂದು ಹೇಳಿದನು. ಹೇಳಿದ ತಕ್ಷಣವೇ ನನಗೆ ಕಣ್ಣು ಕಾಣಿಸಿತು, ನಾನು ಅವನನ್ನು ನೋಡಿದೆನು.
14 “ಆಗ ಅವನು; ‘ನಮ್ಮ ಪೂರ್ವಿಕರ ದೇವರು, ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ, ಆ ನೀತಿವಂತನನ್ನು ನೋಡುವುದಕ್ಕೂ, ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ. 15 ನೀನು ಕಂಡು, ಕೇಳಿದ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು. 16 ಈಗ ನೀನೇಕೆ ತಡಮಾಡುತ್ತೀ? ಎದ್ದು ಕರ್ತನ ಹೆಸರನ್ನು ಹೇಳಿಕೊಳ್ಳುವವನಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೋ’ ಅಂದನು.
17 “ಅನಂತರದಲ್ಲಿ ನಾನು ಯೆರೂಸಲೇಮಿಗೆ ಹಿಂತಿರುಗಿ ಬಂದು ದೇವಾಲಯದೊಳಗೆ ಪ್ರಾರ್ಥನೆಮಾಡುತ್ತಿದ್ದಾಗ, ಧ್ಯಾನಪರವಶನಾಗಿ ಅವನನ್ನು ಕಂಡೆನು. 18 ಆತನು;
19 “ಅದಕ್ಕೆ ನಾನು; ‘ಕರ್ತನೇ, ಎಲ್ಲಾ ಸಭಾಮಂದಿರಗಳಲ್ಲಿ, ನಿನ್ನ ಮೇಲೆ ನಂಬಿಕೆಯಿಟ್ಟವರನ್ನು, ನಾನು ಸೆರೆಮನೆಯಲ್ಲಿ ಹಾಕಿಸುತ್ತಾ, ಹೊಡಿಸುತ್ತಾ ಇದ್ದೆನೆಂಬುದನ್ನು, 20 ಮತ್ತು ನಿನ್ನ ಸಾಕ್ಷಿಯಾದ ಸ್ತೆಫನನ ರಕ್ತವು ಚೆಲ್ಲಿಸಲ್ಪಟ್ಟಾಗ, ನಾನೂ ಹತ್ತಿರ ನಿಂತು ಅದನ್ನು ಸಮ್ಮತಿಸಿ, ಅವನನ್ನು ಕೊಂದವರ ವಸ್ತ್ರಗಳನ್ನು ಕಾಯುತ್ತಿದ್ದೆನಲ್ಲಾ’ ಎಂಬುದು ಅವರೇ ಬಲ್ಲವರಾಗಿದ್ದಾರೆ. 21 ಆದರೆ ಆತನು;
22 ಅಲ್ಲಿಯವರೆಗೆ ಪೌಲನ ಮಾತುಗಳನ್ನು ಅವರು ಕೇಳಿಸಿಕೊಳ್ಳುತ್ತಿದ್ದರು. ಆನಂತರ; “ಇಂಥವನನ್ನು ಭೂಮಿಯಿಂದ ತೆಗೆದುಹಾಕಿಬಿಡು; ಇವನು ಬದುಕುವುದು ಯುಕ್ತವಲ್ಲವೆಂದು” ಕೂಗಿ ಹೇಳಿದರು. 23 ಅವರು ಕೂಗುತ್ತಾ, ತಮ್ಮ ವಸ್ತ್ರಗಳನ್ನು ಹರಿದುಕೊಳ್ಳುತ್ತಾ, ಧೂಳನ್ನು ತೂರುತ್ತಾ ಇರಲಾಗಿ, 24 ಯಾವ ಕಾರಣದಿಂದ ಹೀಗೆ ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬುದನ್ನು ಸಹಸ್ರಾಧಿಪತಿಯು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು, ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಆಜ್ಞಾಪಿಸಿದನು. 25 ಅವರು ಪೌಲನನ್ನು ಬಾರುಗಳಿಂದ ಕಟ್ಟುವಾಗ ಅವನು ತನ್ನ ಹತ್ತಿರ ನಿಂತಿದ್ದ ಶತಾಧಿಪತಿಯನ್ನು; “ರೋಮಾಪುರದ ಹಕ್ಕುದಾರನಾದ ಮನುಷ್ಯನನ್ನು ನ್ಯಾಯವಿಚಾರಣೆಮಾಡದೆ, ಕೊರಡೆಗಳಿಂದ ಹೊಡಿಸುವುದು ನಿಮಗೆ ನ್ಯಾಯವೋ?” ಎಂದು ಕೇಳಿದನು.
26 ಶತಾಧಿಪತಿಯು ಆ ಮಾತನ್ನು ಕೇಳಿ ಸಹಸ್ರಾಧಿಪತಿಯ ಬಳಿಗೆ ಹೋಗಿ; “ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮಾಪುರದ ಹಕ್ಕುದಾರನು” ಎಂದು ಹೇಳಲು, 27 ಸಹಸ್ರಾಧಿಪತಿಯು ಪೌಲನ ಹತ್ತಿರಕ್ಕೆ ಬಂದು; “ನೀನು ರೋಮಾಪುರದವರ ಹಕ್ಕುಳ್ಳವನೇನು? ನನಗೆ ಹೇಳು” ಎಂದು ಅವನನ್ನು ಕೇಳಿದನು. ಅವನು, “ಹೌದು” ಅಂದನು. 28 ಅದಕ್ಕೆ ಸಹಸ್ರಾಧಿಪತಿಯು; “ನಾನು ಬಹಳ ಹಣಕೊಟ್ಟು ಆ ಹಕ್ಕನ್ನು ಕೊಂಡುಕೊಂಡೆನು” ಅನ್ನಲು ಪೌಲನು; “ನಾನಾದರೋ ಹಕ್ಕುದಾರನಾಗಿ ಹುಟ್ಟಿದವನು” ಅಂದನು. 29 ಅವನನ್ನು ಹೊಡೆದು ವಿಚಾರಿಸುವುದಕ್ಕೆ ಬಂದವರು ಕೂಡಲೆ ಅವನನ್ನು ಬಿಟ್ಟುಬಿಟ್ಟರು. ಅದಲ್ಲದೆ ಅವನನ್ನು ರೋಮಾಪುರದ ಹಕ್ಕುದಾರನೆಂದು ಸಹಸ್ರಾಧಿಪತಿಗೆ ತಿಳಿದುಬಂದಾಗ ತಾನು ಅವನನ್ನು ಕಟ್ಟಿಸಿದ್ದರಿಂದ ಅವನಿಗೂ ಭಯಹಿಡಿಯಿತು.
30 ಪೌಲನ ವಿರುದ್ಧ ಯೆಹೂದ್ಯರು ಯಾವ ತಪ್ಪು ಹೊರಿಸುತ್ತಾರೆಂಬುವ ವಿಷಯದಲ್ಲಿ ನಿಜವಾದ ಸಂಗತಿಯನ್ನು, ತಿಳಿಯಬೇಕೆಂದು ಅಪೇಕ್ಷಿಸಿ ಸಹಸ್ರಾಧಿಪತಿಯು ಮರುದಿನ ಅವನ ಬೇಡಿಗಳನ್ನು ಬಿಚ್ಚಿ, ಮುಖ್ಯಯಾಜಕರೂ, ಹಿರೀಸಭೆಯವರೆಲ್ಲರೂ ಕೂಡಿಬರುವುದಕ್ಕೆ ಅಪ್ಪಣೆ ಕೊಟ್ಟು, ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದನು.
<- ಅಪೊಸ್ತಲರ ಕೃತ್ಯಗಳು 21ಅಪೊಸ್ತಲರ ಕೃತ್ಯಗಳು 23 ->