1 ನನ್ನ ಪ್ರಿಯಮಕ್ಕಳೇ, ನೀವು ಪಾಪಮಾಡದಂತೆ ಇರಲು ಇವುಗಳನ್ನು ನಿಮಗೆ ಬರೆಯುತ್ತಿದ್ದೇನೆ. ಯಾವನಾದರೂ ಪಾಪಮಾಡಿದರೆ [a]ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ [b]ಸಹಾಯಕನು ನಮಗಿದ್ದಾನೆ. 2 ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತ ಯಜ್ಞವಾಗಿದ್ದಾನೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ [c]ಸಮಸ್ತ ಲೋಕದ ಪಾಪಗಳಿಗೂ [d]ಪ್ರಾಯಶ್ಚಿತ್ತವಾಗಿದ್ದಾನೆ.
3 [e]ನಾವು ಆತನ ಆಜ್ಞೆಗಳನ್ನು ಅರಿತು ನಡೆಯುವುದರಿಂದಲೇ ಆತನನ್ನು ನಾವು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ. 4 ಒಬ್ಬನು, “ನಾನು [f]ಆತನನ್ನು ಬಲ್ಲೆನು” ಎಂದು ಹೇಳಿ ಆತನ ಆಜ್ಞೆಗಳಂತೆ ನಡೆಯದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವೆಂಬುದು ಅವನಲ್ಲಿ ಇಲ್ಲ. 5 ಯಾರಾದರೂ ಆತನ ವಾಕ್ಯವನ್ನು ಅನುಸರಿಸಿ ನಡೆದರೆ ಅವನಲ್ಲಿ ನಿಜವಾಗಿ [g]ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. [h]ಇಂತಹ ಕಾರ್ಯದಿಂದ ನಾವು ಆತನಲ್ಲಿ ಇದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ. 6 [i]ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು [j]ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವುದಕ್ಕೆ ಬದ್ಧನಾಗಿದ್ದಾನೆ.
7 ಪ್ರಿಯರೇ, [k]ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಲ್ಲ, [l]ಮೊದಲಿನಿಂದಲೂ ನಿಮಗಿದ್ದ [m]ಹಳೆಯ ಆಜ್ಞೆಯಾಗಿದೆ. ಈ ಹಳೆಯ ಆಜ್ಞೆಯು ನೀವು ಕೇಳಿದ ವಾಕ್ಯವೇ. 8 [n]ಆದರೂ ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಂತೆಯೇ ಇರುವುದು. ಇದು ಆತನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ. ಏಕೆಂದರೆ [o]ಕತ್ತಲೆಯು ಕಳೆದುಹೋಗುತ್ತದೆ. [p]ನಿಜವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ. 9 ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು [q]ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ [r]ಮತ್ತು ಪಾಪದಲ್ಲಿ ಎಡವಿಬೀಳುವಂಥದ್ದು ಯಾವುದೂ ಅವನಲ್ಲಿ ಇಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು [s]ಕತ್ತಲೆಯಲ್ಲಿ ನಡೆಯುತ್ತಿದ್ದಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡುಮಾಡಿರುವುದರಿಂದ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅವನಿಗೆ ತಿಳಿಯದು.
12 ಪ್ರಿಯ ಮಕ್ಕಳೇ, ಕ್ರಿಸ್ತನ ಹೆಸರಿನ ನಿಮಿತ್ತ [t]ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. 13 ತಂದೆಗಳಿರಾ, [u]ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಯೌವನಸ್ಥರೇ, ನೀವು [v]ಕೆಡುಕನನ್ನು ಜಯಿಸಿರುವುದರಿಂದ ನಿಮಗೆ ಬರೆಯುತ್ತಿದ್ದೇನೆ. ಮಕ್ಕಳೇ, [w]ನೀವು ತಂದೆಯನ್ನು ಬಲ್ಲವರಾಗಿರುವುದರಿಂದ ನಿಮಗೆ ಬರೆಯುತ್ತಿದ್ದೇನೆ. 14 ತಂದೆಗಳಿರಾ, ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವುದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು [x]ಶಕ್ತರಾಗಿರುವುದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದಲೂ ನೀವು ಕೆಡುಕನನ್ನು ಜಯಿಸಿರುವುದರಿಂದಲೂ ನಾನು ನಿಮಗೆ ಬರೆದಿದ್ದೇನೆ.
15 [y]ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. [z]ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಿನ ಪ್ರೀತಿಯು ಅವನಲ್ಲಿಲ್ಲ. 16 ಲೋಕದಲ್ಲಿರುವ [aa]ಶರೀರದಾಶೆ, [bb]ಕಣ್ಣಿನಾಶೆ, [cc]ಬದುಕುಬಾಳಿನ ಗರ್ವ, ಇವು ತಂದೆಗೆ ಸಂಬಂಧಪಟ್ಟವುಗಳಲ್ಲ. ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ. 17 [dd]ಲೋಕವೂ ಅದರ ಆಸೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸದಾಕಾಲಕ್ಕೂ ಇರುವನು.
18 ಪ್ರಿಯ ಮಕ್ಕಳೇ, [ee]ಇದು ಅಂತ್ಯ ಕಾಲವಾಗಿದೆ. [ff]ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಿ. [gg]ಈಗಾಗಲೇ ಕ್ರಿಸ್ತವಿರೋಧಿಗಳು ಅನೇಕರಿದ್ದಾರೆ. [hh]ಆದ್ದರಿಂದ ಇದು ಅಂತ್ಯ ಕಾಲವಾಗಿದೆ ಎಂದು ನಾವು ಬಲ್ಲವರಾಗಿದ್ದೇವೆ. 19 [ii]ಅವರು ನಮ್ಮಿಂದ ಹೊರಟುಹೋದವರು. ಏಕೆಂದರೆ ಅವರು ನಮ್ಮವರಾಗಿರಲಿಲ್ಲ. [jj]ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟುಹೋದುದರಿಂದ ಅವರೆಲ್ಲರೂ [kk]ನಮ್ಮವರಲ್ಲವೆಂಬುದು ಸ್ಪಷ್ಟವಾಗಿ ತೋರಿಬಂದಿದೆ. 20 ಆದರೆ ನೀವು ಪವಿತ್ರನಾಗಿರುವಾತನಿಂದ [ll]ಅಭಿಷೇಕವನ್ನು ಹೊಂದಿದವರಾಗಿದ್ದೀರಿ [mm]ಎಂಬ ಸತ್ಯವನ್ನೂ ತಿಳಿದವರಾಗಿದ್ದೀರಿ. 21 ನೀವು ಸತ್ಯವನ್ನು ತಿಳಿಯದವರಲ್ಲ. ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವುದಿಲ್ಲವೆಂಬುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.
22 ಸುಳ್ಳುಗಾರನು ಯಾರು? [nn]ಯೇಸುವನ್ನು ಕ್ರಿಸ್ತನಲ್ಲ ಎಂದು ಅಲ್ಲಗಳೆಯುವವನು ಸುಳ್ಳುಗಾರನಾಗಿದ್ದಾಯೇ ಹೊರತು ಮತ್ತಾರು ಆಗಿರಲು ಸಾಧ್ಯ? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನು [oo]ಕ್ರಿಸ್ತವಿರೋಧಿಯಾಗಿದ್ದಾನೆ. 23 [pp]ಯಾರು ದೇವರ ಮಗನನ್ನು ಅಲ್ಲಗಳೆಯುವನೋ ಅವನು ದೇವರಿಗೆ ಸೇರಿದವನಲ್ಲ. ಯಾರು ಮಗನನ್ನು ಒಪ್ಪಿಕೊಳ್ಳುವನೋ ಅವನು ತಂದೆಯಾದ ದೇವರಿಗೆ ಸೇರಿದವನಾಗಿದ್ದಾನೆ. 24 ನೀವಂತೂ ಯಾವ ಬೋಧನೆಯನ್ನು ಮೊದಲಿನಿಂದ ಕೇಳಿದ್ದೀರೋ [qq]ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ [rr]ನೀವು ಸಹ ಮಗನಲ್ಲಿಯೂ ತಂದೆಯಾದ ದೇವರಲ್ಲಿಯೂ ನೆಲೆಗೊಂಡಿರುತ್ತೀರಿ. 25 ಆತನು ನಮಗೆ ಮಾಡಿರುವ ವಾಗ್ದಾನವು ಅದೇನೆಂದರೆ [ss]ನಿತ್ಯಜೀವವೇ ಆಗಿದೆ.
26 [tt]ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಿ ತಪ್ಪುದಾರಿಗೆ ಎಳೆಯುವವರ ಕುರಿತಾಗಿ ಇವುಗಳನ್ನು ನಾನು ನಿಮಗೆ ಬರೆದಿದ್ದೇನೆ. 27 ಆದರೆ [uu]ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದ [vv]ಯಾರೂ ನಿಮಗೆ ಬೋಧನೆ ಮಾಡುವುದು ಅಗತ್ಯವಿಲ್ಲ. ಆತನು ನಿಮಗೆ ಮಾಡಿರುವ ಅಭಿಷೇಕವೇ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿ ಬೋಧನೆ ಮಾಡುವಂಥದ್ದಾಗಿದೆ ಅದು ಸುಳ್ಳಲ್ಲ [ww]ಸತ್ಯವಾಗಿದೆ. ಅದು ನಿಮಗೆ ಬೋಧನೆ ಮಾಡಿದ ಪ್ರಕಾರವೇ ಆತನಲ್ಲಿ ನೆಲೆಗೊಂಡಿರುವಿರಿ. 28 ಪ್ರಿಯ ಮಕ್ಕಳೇ, [xx]ಆತನು ಪ್ರತ್ಯಕ್ಷನಾಗುವಾಗ ನಾವು [yy]ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ [zz]ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರೋಣ. 29 []ಆತನು ನೀತಿವಂತನಾಗಿದ್ದಾನೆಂಬುದು ನಿಮಗೆ ತಿಳಿದಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು []ಆತನಿಂದ ಹುಟ್ಟಿದವನೆಂದು ನೀವು ಬಲ್ಲವರಾಗಿರುತ್ತೀರಿ.
<- 1 ಯೋಹಾನನು 11 ಯೋಹಾನನು 3 ->-
a 2:1 ರೋಮಾ. 8:34; 1 ತಿಮೊ. 2:5; ಇಬ್ರಿ. 7:25:
b 2:1 ಯೋಹಾ 14:16, 26; 15:26; 16:7. ರೋಮಾ. 8:26:
c 2:2 1 ಯೋಹಾ 4:14; ಯೋಹಾ 1:29; 4:42; 11:5 1, 52; 12:32:
d 2:2 ಅಥವಾ, ನಿವಾರಣೆಮಾಡುವವನಾಗಿದ್ದಾನೆ. 1 ಯೋಹಾ 4:10; ರೋಮಾ. 3:25; 2 ಕೊರಿ 5:18, 19; ಕೊಲೊ 1:20:
e 2:3 ಯೋಹಾ 14:15; 15:10; ಪ್ರಕ 12:17; 14:12:
f 2:4 1 ಯೋಹಾ 1:8; ಯೋಹಾ 8:44:
g 2:5 1 ಯೋಹಾ 4:12:
h 2:5 1 ಯೋಹಾ 3:24; 4:13; 5:2:
i 2:6 ಯೋಹಾ 15:4, 5, 7:
j 2:6 ಮತ್ತಾ 11:29:
k 2:7 2 ಯೋಹಾ 5:
l 2:7 ವ. 24; 1 ಯೋಹಾ 3:11; 2 ಯೋಹಾ 5, 6:
m 2:7 ಯಾಜ 19:18:
n 2:8 ಯೋಹಾ 13:34; ರೋಮಾ. 13:8; ಕೊಲೊ 3:14; 1 ತಿಮೊ. 1:5
o 2:8 ರೋಮಾ. 13:12; ಎಫೆ 5:8; 1 ಥೆಸ. 5:4, 5:
p 2:8 ಯೋಹಾ 1:9; 8:12; 9:5:
q 2:9 ಅಥವಾ, ಅಲಕ್ಷ್ಯಮಾಡುವವನು. 1 ಯೋಹಾ 3:14, 15; 4:20; ತೀತ. 3:3; ರೋಮಾ. 9:13:
r 2:10 ಯೋಹಾ 11:10; 2 ಪೇತ್ರ. 1:10:
s 2:11 1 ಯೋಹಾ 1:6
t 2:12 ಲೂಕ 24:47; ಅ. ಕೃ. 10:43; 13:38:
u 2:13 ಯೋಹಾ 1:1; 1 ಯೋಹಾ 1:1:
v 2:13 ಮತ್ತಾ 5:37; 6:13; 13:19; ಯೋಹಾ 17:15; ಎಫೆ 6:16; 2 ಥೆಸ. 3:3; 1 ಯೋಹಾ 3:12; 5:18, 19:
w 2:13 ಯೋಹಾ 14:7-9:
x 2:14 ಎಫೆ 6:10; 1 ಯೋಹಾ 5:4, 5:
y 2:15 ರೋಮಾ. 12:2; 2 ತಿಮೊ. 4:10:
z 2:15 ಯಾಕೋಬ 4:4:
aa 2:16 ರೋಮಾ. 13:14; ಎಫೆ 2:3; 1 ಪೇತ್ರ. 4:2; 2 ಪೇತ್ರ. 2:18:
bb 2:16 ಪ್ರಸಂಗಿ. 4:8; 5:11:
cc 2:16 ಆಸ್ತಿಪಾಸ್ತಿಯ ಅಹಂಕಾರ.
dd 2:17 1 ಕೊರಿ 7:31:
ee 2:18 2 ತಿಮೊ. 3:1; ಯಾಕೋಬ. 5:3; 2 ಪೇತ್ರ. 3:3; ಯೂದ. 18:
ff 2:18 ಅಥವಾ, ಕ್ರಿಸ್ತವಿರೋಧಿ; ವ. 22; 1 ಯೋಹಾ 4:3; 2 ಯೋಹಾ 7; ಮತ್ತಾ 24:5, 24
gg 2:18 1 ಯೋಹಾ 4:1; ಮತ್ತಾ 24:5:
hh 2:18 1 ತಿಮೊ. 4:1:
ii 2:19 ಧರ್ಮೋ 13:13; ಅ. ಕೃ. 20:30.
jj 2:19 ಯೋಹಾ 17:12:
kk 2:19 1 ಕೊರಿ 11:19:
ll 2:20 ವ. 27:2 ಕೊರಿ 1:21:
mm 2:20 ವ. 27; ಮತ್ತಾ 13:11:
nn 2:22 1 ಯೋಹಾ 4:3; 2 ಯೋಹಾ 7:
oo 2:22 ವ. 18; 1 ಯೋಹಾ 4:3; 2 ಯೋಹಾ 7. ಮತ್ತಾ 24:5, 24:
pp 2:23 1 ಯೋಹಾ 4:15; 2 ಯೋಹಾ 9:
qq 2:24 1 ಯೋಹಾ 3:11; 2 ಯೋಹಾ 6:
rr 2:24 ಯೋಹಾ 14:23; 1 ಯೋಹಾ 1:3:
ss 2:25 ಯೋಹಾ 3:15; 5:24; 6:47, 54; 10:28; 17:2, 3:
tt 2:26 1 ಯೋಹಾ 3, 7; 2 ಯೋಹಾ 7:
uu 2:27 ವ. 20:
vv 2:27 ಯೆರೆ 31:34; ಇಬ್ರಿ. 8-11:
ww 2:27 ಯೋಹಾ 14:17:
xx 2:28 1 ಯೋಹಾ 3:2; ಕೊಲೊ 3:4:
yy 2:28 1 ಥೆಸ. 2:19:
zz 2:28 1 ಯೋಹಾ 3:21; 4:17; 5:14:
2:29 1 ಯೋಹಾ 3:7:
2:29 1 ಯೋಹಾ 3:9; 4:7; 5:1, 4, 18; 3 ಯೋಹಾ 11: